ಅಭಿಪ್ರಾಯ / ಸಲಹೆಗಳು

ಆಯೋಗದ ಕಾರ್ಯಗಳು

ಮಾನವ ಹಕ್ಕುಗಳ ಉತ್ತೇಜನ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಇರುವ ರಕ್ಷಣೋಪಾಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೊಳಗಾದವರ ನೆರವಿಗಾಗಿ ಆಯೋಗವು ಈ ಕೆಳಕಂಡಂತೆ ಕಾರ್ಯ ನಿರ್ವಹಿಸುತ್ತಿದೆ.

• ಸ್ವಯಂ ಪ್ರೇರಿತವಾಗಿ ಅಥವಾ ದುಷ್ಕಾರ್ಯಗಳಿಗೆ ತುತ್ತಾದವರು ಅಥವಾ ಅವರ ಪರವಾಗಿ ಯಾವುದೇ ವ್ಯಕ್ತಿಯು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ನೀಡಿದ ದೂರನ್ನು ಗಮನಕ್ಕೆ ತಗೆದುಕೊಳ್ಳುವುದು, ಅಥವಾ ಅದಕ್ಕೆ ಕುಮ್ಮಕ್ಕುಕೊಟ್ಟ ಅಥವಾ ಅಂತಹ ಉಲ್ಲಂಘನೆಯನ್ನು ನಿರ್ಲಕ್ಷಿಸಿದ ಸಾರ್ವಜನಿಕ ನೌಕರರ ವಿರುದ್ಧ ಮಾಡಿದ ದೂರುಗಳು.
• ದೂರಿನ ವಿಷಯ ಕುರಿತು ವಿಚಾರಣೆಯನ್ನು ಕೈಗೊಂಡು ಅಂತಹ ವಿಷಯಗಳ ಬಗ್ಗೆ ಕಾನೂನಿನ ಪ್ರಕಾರ ಆದೇಶಗಳನ್ನು ಮಾಡುವುದು.
• ವಿಶ್ವವಿದ್ಯಾಲಯ ಮತ್ತು ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿದ್ಯಾರ್ಥಿ / ಅಧ್ಯಾಪಕ ವೃಂದಗಳಿಗೆ ಮಾನವ ಹಕ್ಕುಗಳ ಕಾರ್ಯಾಗಾರ / ಸಭೆಗಳನ್ನೇರ್ಪಡಿಸಿ ತರಬೇತಿ ನೀಡುವುದು.
• ಸಮಾಜದ ವಿವಿಧ ವರ್ಗಗಳಲ್ಲಿ ಮಾನವ ಹಕ್ಕುಗಳ ಅರಿವು / ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾರ್ಯಾಗಾರ, ಕಾರ್ಯಕ್ರಮ / ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಉತ್ತೇಜಿಸುವುದು ಮತ್ತು ರಾಜ್ಯದ ಸರ್ಕಾರಿ ಸಂಸ್ಥೆಗಳಾದ ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಕರ್ನಾಟಕ ಪೊಲೀಸ್ ಅಕಾಡಮಿ, ಮೈಸೂರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇತ್ಯಾದಿಗಳಲ್ಲಿ ತರಬೇತಿ ಹೊಂದುತ್ತಿರುವ ಸರ್ಕಾರಿ ನೌಕರರಿಗೆ ಅರಿವು ನೀಡುವುದು.
• ಬಂದೀಖಾನೆಗಳು ಅಥವಾ ರಾಜ್ಯ ಸರ್ಕಾರದ ನಿಯಂತ್ರಣ ಇರುವ ಇತರೆ ಸಂಸ್ಥೆಗಳಲ್ಲಿ ವಿಚಾರಣೆ / ಆಲಿಕೆ / ಪರಿವರ್ತನೆ / ರಕ್ಷಣೆ / ಬಂಧನದಲ್ಲಿರಿಸಿದ ಅಥವಾ ವಸತಿ ಪಡೆದ ಜನರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಭೇಟಿ ನೀಡುವುದು ಮತ್ತು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
• ಸಮಾಜದಲ್ಲಿ ಅರಿವು ಮೂಡಿಸಲು ಮಾನವ ಹಕ್ಕುಗಳ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುವುದು.
• ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಇರುವ ರಕ್ಷಣೋಪಾಯಗಳ ಬಗ್ಗೆ ಸಮಾಜದಲ್ಲಿ ತಿಳುವಳಿಕೆ ಮೂಡಿಸಲು ಸರ್ಕಾರೇತರ ಸಂಘ-ಸಂಸ್ಥೆಗಳನ್ನು ಉತ್ತೇಜಿಸುವುದು.

ಅಧಿನಿಯಮದ ಅಡಿ ದೂರುಗಳನ್ನು ವಿಚಾರಿಸುವಾಗ ಆಯೋಗವು ಒಂದು ಸಿವಿಲ್ ನ್ಯಾಯಾಲಯವೆಂದು ಪರಿಗಣಿಸಲ್ಪಡುತ್ತದೆ. ರಾಜ್ಯ ಆಯೋಗವು ಕೈಗೊಳ್ಳುವ ಎಲ್ಲಾ ನಡವಳಿಗಳು ಸಿವಿಲ್ ನ್ಯಾಯಾಲಯದ ನಡವಳಿಗಳೆಂದು ಪರಿಗಣಿಸಲ್ಪಡುತ್ತದೆ.

ರಾಜ್ಯ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳು ಕೈಗೊಳ್ಳುವ ರಾಜ್ಯವ್ಯಾಪ್ತಿ ಪ್ರವಾಸದಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವುದು ಮತ್ತು ಮಾನವ ಹಕ್ಕುಗಳ ಉಲ್ಲಂಘನಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳ ಪರಿಶೀಲನೆ ಮಾಡಿ, ಪುನರಾವಲೋಕನ ಮಾಡಿ ಸಮಸ್ಯೆ ಪರಿಹರಿಸಲು ಘಟನಾ ಸ್ಥಳಗಳಿಗೆ ಭೇಟಿ ನೀಡುವುದು. ಅಧಿಕಾರಿ/ನೌಕರರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ಜನತೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು 2012ನೇ ಸಾಲಿನಿಂದ ರಾಜ್ಯಮಟ್ಟದಲ್ಲಿ ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲಿಯೂ ಸಹ ಮಾನವ ಹಕ್ಕುಗಳ ದಿನಾಚರಣೆಯನ್ನು ಪ್ರತಿ ವರ್ಷದ ಡಿಸೆಂಬರ್ 10ನೇ ತಾರೀಖಿನಂದು ಆಚರಿಸಲಾಗುತ್ತಿದೆ.

ಆಯೋಗದ ಸಿಬ್ಬಂದಿಗಳ ಹಾಜರಾತಿಯಲ್ಲಿ ಪ್ರಗತಿ ತರಲು, ಅವರಲ್ಲಿ ಸಮಯ ಪ್ರಜ್ಞೆ ಹೆಚ್ಚಿಸಲು ಬಯೋಮೆಟ್ರಿಕ್ ಯಂತ್ರವನ್ನು ಆಯೋಗದ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಲಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು‘ದೂರು ನಿರ್ವಹಣಾ ಪದ್ಧತಿ’ಅಭಿವೃದ್ಧಿ ಪಡಿಸಿದ್ದು, ಈ ಪದ್ಧತಿಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿಯೂ ಸಹನವೆಂಬರ್, 2014ರಿಂದ ಅಳವಡಿಸಿಕೊಳ್ಳಲಾಗಿದೆ. ಈ ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ದೂರುದಾರರು ದೂರುಗಳನ್ನು ದಾಖಲಿಸಬಹುದು ಮತ್ತು ದೂರಿನ ಪ್ರಕ್ರಿಯೆಯನ್ನು ತಿಳಿಯಬಹುದಾಗಿದೆ. ಈ ವ್ಯವಸ್ಥೆಯಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ದೂರುಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಬಹುದಾಗಿದೆ. ಈ ಪದ್ಧತಿಯನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಕೊಂಡು ದೂರುಗಳನ್ನು ತೀವ್ರಗತಿಯಲ್ಲಿ ನಿರ್ವಹಿಸಲು, ಸರಳವಾಗಿ ಗುರುತಿಸಲು ಮತ್ತು ಹಿಂದಕ್ಕೆ ಪಡೆಯಲು ಅನುಕೂಲವಾಗುತ್ತದೆ.

ಸಾರ್ವಜನಿಕರಿಗೆ ದೂರು ಸಲ್ಲಿಸಲು ಆಯೋಗವನ್ನು ಖುದ್ದಾಗಿ ಸಂಪರ್ಕಿಸುವ ತೊಂದರೆ ತಪ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ‘ಸಹಾಯವಾಣಿ’ವ್ಯವಸ್ಥೆಯನ್ನು ದಿನಾಂಕ 6/3/2015ರಿಂದ ಪ್ರಾರಂಭಿಸಲಾಗಿದೆ. ಶುಲ್ಕರಹಿತ ದೂರವಾಣಿ ಸಂಖ್ಯೆ: 1800-425-23333 ಮೂಲಕ ಸಾರ್ವಜನಿಕರು ದೂರುಗಳನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಬಹುದಾಗಿದೆ ಅಥವಾ ಪತ್ರದ ಮೂಲಕ / ಇ-ಮೇಲ್ ಮೂಲಕ ವ್ಯವಹರಿಸಬಹುದಾಗಿದೆ.

ಆಯೋಗದ ಕಾರ್ಯ ಚಟುವಟಿಕೆ ಕುರಿತಾದ ಮಾಹಿತಿಯನ್ನೊಳಗೊಂಡ ‘ಮಾನವ ಹಕ್ಕು ವಾರ್ತೆ’ ಎಂಬ ತ್ರೈಮಾಸಿಕ ವಾರ್ತಾ ಪತ್ರವನ್ನು 2014ರ ಡಿಸೆಂಬರ್ ತಿಂಗಳಿಂದ ಪ್ರಕಟಿಸಲಾಗುತ್ತಿದೆ.

ರಾಜ್ಯ ಆಯೋಗದಲ್ಲಿನ ಹಳೆಯ ದಾಖಲೆಗಳನ್ನು ಸಂರಕ್ಷಿಸಿಡಲು ಮತ್ತು ಅಗತ್ಯವೆನಿಸಿದಾಗ ಅವುಗಳನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗುವಂತೆ ದಾಖಲೆಗಳ ಸ್ಕ್ಯಾನಿಂಗ್ ಮಾಡಲಾಗುತ್ತಿದೆ.

ಒಟ್ಟಾರೆ ಸಮಾಜದ ಎಲ್ಲಾ ಸ್ಥರಗಳ ಜನರ ಹಕ್ಕುಗಳ ಉಲ್ಲಂಘನೆಗಳಿಗೆ ಆಯೋಗವು ಸ್ಪಂದಿಸುವ ಕಾರ್ಯನಿರ್ವಹಿಸುತ್ತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ಸಾಬೀತಾದ ಪ್ರಕರಣಗಳಲ್ಲಿ ಸಂತ್ರಸ್ಥರಿಗೆ ಪರಿಹಾರ ಪಾವತಿಸಲು ಆಯೋಗವು ಶಿಫಾರಸ್ಸು ಮಾಡುತ್ತದೆ.

ವಿವಿಧ ಅವಧಿಗಳಲ್ಲಿ ಭಾರತ ಮತ್ತು ಹೊರ ದೇಶದ ಕಾನೂನು ಪದವಿ ವಿದ್ಯಾರ್ಥಿಗಳು ಇಂಟರ್ನ್‍ಶಿಪ್ ಮಾಡಲು ಆಯೋಗವು ಅವಕಾಶ ಕಲ್ಪಿಸಿದೆ. ಪ್ರಸಕ್ತ ವರ್ಷದಲ್ಲಿ ಒಂಭತ್ತು ಕಾನೂನು ವಿದ್ಯಾರ್ಥಿಗಳು ಆಯೋಗದಲ್ಲಿ ಇಂಟರ್ನ್‍ಶಿಪ್ ಮಾಡಿದ್ದಾರೆ.

 

ಇತ್ತೀಚಿನ ನವೀಕರಣ​ : 26-02-2020 04:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080