ಅಭಿಪ್ರಾಯ / ಸಲಹೆಗಳು

ಆಯೋಗದ ರಚನೆ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ, 1993ರ ಪ್ರಕರಣ 21ರ ಅನ್ವಯ ಸ್ಥಾಪಿಸಲ್ಪಟ್ಟ ಶಾಸನಬದ್ಧ ಸಂಸ್ಥೆಯಾಗಿರುತ್ತದೆ. ಆಯೋಗವು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರುಗಳನ್ನು ಒಳಗೊಂಡಿದೆ. ಅವರುಗಳನ್ನು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ, 1993ರ (ಈ ಮುಂದೆ ಅಧಿನಿಯಮವೆಂದು ಹೇಳಿದೆ) ಪ್ರಕರಣ 22(1)ರಂತೆ ರಚಿಸಲಾದ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ನೇಮಕಾತಿ ಮಾಡುತ್ತಾರೆ.

ಅಧ್ಯಕ್ಷರ ನೇಮಕಾತಿ:

ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ, 1993ರ ಪ್ರಕರಣ 21(2)ರ ಅಡಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿರುವವರನ್ನು ಐದು ವರ್ಷಗಳು ಅಥವಾ ನೇಮಕಗೊಂಡವರ ವಯಸ್ಸು 70 ವರ್ಷ ಪೂರ್ಣವಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ರಾಜ್ಯ ಆಯೋಗದ ಅಧ್ಯಕ್ಷರನ್ನಾಗಿ ನೇಮಕಮಾಡಲಾಗುತ್ತದೆ.

ಪ್ರಸ್ತುತ ಮಾನ್ಯ ನ್ಯಾಯಮೂರ್ತಿ ಶ್ರೀ ಧಿರೇಂದ್ರ ಹೆಚ್. ವಘೇಲ, ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ, ಒಡಿಶಾ ಮತ್ತು ಮುಂಬೈ ಉಚ್ಚ ನ್ಯಾಯಾಲಯಗಳು ಇವರು ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ದಿನಾಂಕ 12/3/2018ರಂದು ನೇಮಕಗೊಂಡಿರುತ್ತಾರೆ.

ಆಯೋಗದ ಸದಸ್ಯರ ನೇಮಕಾತಿ:

ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ, 1993ರ ಪ್ರಕರಣ 21(2)ರ ಅಡಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿರುವ ಅಥವಾ ಜಿಲ್ಲಾ ನ್ಯಾಯಾಧೀಶರಾಗಿ ಏಳು ವರ್ಷ ಕಾರ್ಯ ನಿರ್ವಹಿಸಿರುವವರನ್ನು ಅಡಿ ಐದು ವರ್ಷಗಳು ಅಥವಾ ನೇಮಕಗೊಂಡವರ ವಯಸ್ಸು 70 ವರ್ಷ ಪೂರ್ಣವಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ರಾಜ್ಯ ಆಯೋಗದ ಸದಸ್ಯರನ್ನಾಗಿ ನೇಮಕಮಾಡಲಾಗುತ್ತದೆ.

ಪ್ರಸ್ತುತ ಈ ಕೆಳಕಂಡವರು ರಾಜ್ಯ ಆಯೋಗದ ಸದಸ್ಯರುಗಳಾಗಿ ನೇಮಕಗೊಂಡಿರುತ್ತಾರೆ:

(1) ಶ್ರೀ ರೂಪಕ್ ಕುಮಾರ್ ದತ್ತ, ಭಾ.ಪೊ.ಸೇ (ನಿವೃತ್ತ ಡಿಜಿ & ಐಜಿಪಿ) - ಸದಸ್ಯರು (ದಿನಾಂಕ 26/2/2018 ರಿಂದ)
(2) ಶ್ರೀ ಕೆ.ಬಿ. ಚಂಗಪ್ಪ, ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು - ಸದಸ್ಯರು (ದಿನಾಂಕ 19/2/2018 ರಿಂದ)

ಇತ್ತೀಚಿನ ನವೀಕರಣ​ : 26-02-2020 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080