ನಮ್ಮ ಬಗ್ಗೆ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಸ್ವಾಗತ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ, 1993ರ ಅಡಿ ದಿನಾಂಕ 25/7/2007ರಂದು ಅಸ್ತಿತ್ವಕ್ಕೆ ಬಂದಿದ್ದು, ಬೆಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿರುತ್ತದೆ.   

ಆಯೋಗವು ಸ್ಥಾಪನೆಯಾದ ನಂತರ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳು ಕಾರ್ಯನಿರ್ವಹಿಸಿರುತ್ತಾರೆ.

(1) ಮಾನ್ಯ ನ್ಯಾಯಮೂರ್ತಿ ಡಾ. ಎಸ್.ಆರ್.ನಾಯಕ್, ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು, ಛತ್ತೀಸ್‍ಗಡ್ ಉಚ್ಚ ನ್ಯಾಯಾಲಯ - ಅಧ್ಯಕ್ಷರು (ದಿನಾಂಕ 25/7/2007 ರಿಂದ 25/7/2012)
(2) ಶ್ರೀಮತಿ ಮೀರಾ ಸಿ. ಸಕ್ಸೇನಾ, ಭಾ.ಆ.ಸೇ (ನಿವೃತ್ತ) - ಹಂಗಾಮಿ ಅಧ್ಯಕ್ಷರು (ದಿನಾಂಕ 23/6/2014 ರಿಂದ 20/11/2017)
(3) ಶ್ರೀ ಬಿ ಪಾರ್ಥಸಾರಥಿ, ಭಾ.ಆ.ಸೇ (ನಿವೃತ್ತ) - ಸದಸ್ಯರು (ದಿನಾಂಕ 25/7/2007 ರಿಂದ 2/3/2012)
(4) ಶ್ರೀ ಆರ್.ಹೆಚ್ ರಡ್ಡಿ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು - ಸದಸ್ಯರು (ದಿನಾಂಕ 28/7/2007 ರಿಂದ 27/7/2012)
(5) ಶ್ರೀಮತಿ ಮೀರಾ ಸಿ. ಸಕ್ಸೇನಾ, ಭಾ.ಆ.ಸೇ (ನಿವೃತ್ತ) - ಸದಸ್ಯರು (ದಿನಾಂಕ 21/11/2012 ರಿಂದ 22/6/2014)
(6) ಶ್ರೀ ಸಿ.ಜಿ. ಹುನಗುಂದ್, ವಿಶ್ರಾಂತ ಜಿಲ್ಲಾ ನ್ಯಾಯಾಧೀಶರು - ಸದಸ್ಯರು (ದಿನಾಂಕ 29/11/2012 ರಿಂದ 28/11/2017)

ಪ್ರಸ್ತುತ ಈ ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ:

(1) ಮಾನ್ಯ ನ್ಯಾಯಮೂರ್ತಿ ಶ್ರೀ ಧಿರೇಂದ್ರ ಹೆಚ್. ವಘೇಲ, ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ, ಒಡಿಶಾ ಮತ್ತು ಮುಂಬೈ ಉಚ್ಚ ನ್ಯಾಯಾಲಯಗಳು– ಮಾನ್ಯ ಅಧ್ಯಕ್ಷರು (ದಿನಾಂಕ 12/3/2018ರಿಂದ)
(2) ಶ್ರೀ ರೂಪಕ್ ಕುಮಾರ್ ದತ್ತ, ಭಾ.ಪೊ.ಸೇ (ನಿವೃತ್ತ ಡಿಜಿ & ಐಜಿಪಿ) –ಮಾನ್ಯ ಸದಸ್ಯರು (ದಿನಾಂಕ 26/2/2018 ರಿಂದ)
(3) ಶ್ರೀ ಕೆ.ಬಿ. ಚಂಗಪ್ಪ, ವಿಶ್ರಾಂತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು –ಮಾನ್ಯ ಸದಸ್ಯರು (ದಿನಾಂಕ 19/2/2018 ರಿಂದ)

ಆಯೋಗವು 12 ವರ್ಷಗಳ ಅವಧಿಯಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ಇರುವ ಮಾರ್ಗೋಪಾಯಗಳ ಅರಿವಿಗೆ ಉತ್ತೇಜನೆ ನೀಡುವುದು, ಸಾರ್ವಜನಿಕರಿಗೆ ರಕ್ಷಣೆ ನೀಡುವುದು, ಮಾನವ ಹಕ್ಕುಗಳ ಉಲ್ಲಂಘನೆಗೆ ತುತ್ತಾದವರಿಗೆ ಪರಿಹಾರ ನೀಡುವುದು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ಅದನ್ನು ತಡೆಯುವಲ್ಲಿ ಉದಾಸೀನ ತೋರುವ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸಹ ಶಿಫಾರಸ್ಸು ಮಾಡುವ ಮೂಲಕ ರಾಜ್ಯದ ಜನತೆಗೆ ಸೇವೆ ಸಲ್ಲಿಸಲು ಶ್ರಮಿಸುತ್ತಿದೆ.

 

ಇತ್ತೀಚಿನ ನವೀಕರಣ​ : 26-02-2020 04:32 PM ಅನುಮೋದಕರು: Admin